Movie Release: ಕನ್ನಡದ ಪಚ್ಚ, ತೆಲುಗು ಪೆದ್ದಿ, ಬಂದರ್ ಶೆಟ್ರು! ಈ ವಾರ ಥಿಯೇಟರ್ಗೆ ಬರ್ತಿರೋರು ಇವರೇ
ಸಿನಿಮಾ ಪ್ರಿಯರಿಗೆ (Cini Lovers) ಈ ಶುಕ್ರವಾರ ಮತ್ತು ಗುರುವಾರ ಹಲವು ವಿಭಿನ್ನ ಕಾನ್ಸೆಪ್ಟ್‌ನ ಚಿತ್ರಗಳು ಬರ್ತಿವೆ. ಕನ್ನಡ, ತೆಲುಗು, ಹಿಂದಿ, ಮರಾಠಿ ಹೀಗೆ ಎಲ್ಲೆಡೆ ಹೇಳಿಕೊಳ್ಳುವ ಒಂದಿಷ್ಟು ಸಿನಿಮಾ ಬರ್ತಿವೆ. ಕನ್ನಡದಲ್ಲಿ ಮ್ಯಾಂಗೋ ಪಚ್ಚ (Mango Pachcha) ಇದೆ. ತೆಲುಗು ಭಾಷೆಯಲ್ಲಿ ಪೆದ್ದಿ ಚಿತ್ರ (Peddi Movie) ಇದೆ. ಮರಾಠಿ ಭಾಷೆಯಲ್ಲಿ ತುಂಬಾಡ್ಚಿ ಮಂಜುಳಾ ಇದೆ. ಹಿಂದಿಯಲ್ಲಿ ಬಂದರ್ ಸಿನಿಮಾ (Bandar Movie) ಇದೆ. ಈ ಸಿನಿಮಾಗಳ ಬಗ್ಗೆ ಹೇಳೋಕೆ ಒಂದಷ್ಟು ವಿಷಯ ಇದೆ. ಅದು ಇಲ್ಲಿದೆ ಓದಿ.
ಯಾಕಂದ್ರೆ ಈ ಚಿತ್ರದ ಸಂಚಿತ್ ಸಜೀವ್ ಬೇರೆ ಯಾರೋ ಅಲ್ಲ. ಸುದೀಪ್ ಅವರ ಅಕ್ಕನ ಮಗನೇ ಆಗಿದ್ದಾರೆ. ಪ್ರಿಯಾ ಸುದೀಪ್ ಅವರು ತಮ್ಮ ಸುಪ್ರಿಯಾನ್ವಿ ಪಿಕ್ಚರ್ಸ್ ಸ್ಟುಡಿಯೋ ಮೂಲಕವೇ ಅಳಿಯನನ್ನ ಲಾಂಚ್ ಮಾಡುತ್ತಿದ್ದಾರೆ. ವಿವೇಕ್ ಈ ಚಿತ್ರವನ್ನ ಡೈರೆಕ್ಷನ್ ಮಾಡಿದ್ದಾರೆ. ಇದು ಇವರ ಮೊದಲ ಚಿತ್ರವೇ ಆಗಿದೆ.