Select Location
All Locations
State
Region
City / District
ಅಮೆರಿಕದ ಪ್ರಸ್ತಾವಕ್ಕೆ ಇನ್ನಷ್ಟೇ ಪ್ರತಿಕ್ರಿಯಿಸಬೇಕಿದೆ ಇರಾನ್

ಅಮೆರಿಕದ ಪ್ರಸ್ತಾವಕ್ಕೆ ಇನ್ನಷ್ಟೇ ಪ್ರತಿಕ್ರಿಯಿಸಬೇಕಿದೆ ಇರಾನ್

ಟೆಹರಾನ್‌: ಸಂಘರ್ಷವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಅಮೆರಿಕ ಪ್ರಸ್ತಾವಿತ ಅಂತಿಮ ಒಪ್ಪಂದದ ಕುರಿತು ಇರಾನ್‌ ಇನ್ನೂ ಪ್ರತಿಕ್ರಿಯೆ ನೀಡಿಲ್ಲ. ಒಪ್ಪಂದದ ಕರಡಿಗೆ ಸಂಬಂಧಿಸಿದಂತೆ ಅಂತಿಮ ಹಂತದ ಚರ್ಚೆಯು ರಾಜಧಾನಿ ಟೆಹರಾನ್‌ನಲ್ಲಿ ಮುಂದುವರಿದಿದೆ. ಈ ಸಂಬಂಧ ‘Mehr News’ ಸುದ್ದಿ ಸಂಸ್ಥೆಗೆ ಮೂಲಗಳು ತಿಳಿಸಿವೆ. ಅಮೆರಿಕವು ಒಪ್ಪಂದಗಳ ಉಲ್ಲಂಘನೆ ಮತ್ತು ಅಪನಂಬಿಕೆಯ ದೀರ್ಘಕಾಲದ ಇತಿಹಾಸ ಹೊಂದಿದೆ. ಇದನ್ನು ಇರಾನ್ ಗಂಭೀರವಾಗಿ ಪರಿಗಣಿಸುತ್ತಿರುವುದರಿಂದ, ಅಮೆರಿಕದ ಪ್ರಸ್ತಾಪವನ್ನು ಎಚ್ಚರಿಕೆಯಿಂದ ಪರಿಶೀಲಿಸುತ್ತಿದೆ ಎಂದೂ ಹೇಳಿವೆ. ‘ಈವರೆಗಿನ ಅನುಭವಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಸ್ಪಷ್ಟ ಮತ್ತು ನಿಜವಾದ ಪ್ರಯೋಜಗಳನ್ನು ಇರಾನ್‌ ಎದುರು ನೋಡುತ್ತಿದೆ’ ಎಂದು ತಿಳಿದುಬಂದಿದೆ.

ಇಸ್ರೇಲ್ ಹಾಗೂ ಅಮೆರಿಕ ಪಡೆಗಳು ಫೆಬ್ರುವರಿ 28ರಂದು ಇರಾನ್‌ ಮೇಲೆ ಜಂಟಿ ದಾಳಿ ನಡೆಸಿದ್ದವು. ದಾಳಿ ವೇಳೆ ಪರಮೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಸೇರಿದಂತೆ ಹಲವರು ಹತರಾಗಿದ್ದರು. ಇದರಿಂದ ಕೆರಳಿದ ಇರಾನ್‌, ಪ್ರತೀಕಾರವಾಗಿ ಅಮೆರಿಕ, ಇಸ್ರೇಲ್‌ ಮೇಲೆ ದಾಳಿ ಮಾಡಿತ್ತು. ಮಾತ್ರವಲ್ಲದೆ, ಆ ದೇಶಗಳ ಮಿತ್ರರಾಷ್ಟ್ರಗಳತ್ತಲೂ ಕ್ಷಿಪಣಿ ಉಡಾಯಿಸಿತ್ತು. ಹಾಗೆಯೇ, ಜಾಗತಿಕ ತೈಲ ಪೂರೈಕೆ ಪ್ರಮುಖ ಜಲಮಾರ್ಗವಾದ ಹೊರ್ಮುಜ್‌ನಲ್ಲಿ ಹಡಗು ಸಂಚಾರವನ್ನು ನಿರ್ಬಂಧಿಸಿದೆ. ಇದರ ಪರಿಣಾಮ ವಿಶ್ವ ಆರ್ಥಿಕತೆಯ ಮೇಲೆ ಆಗಿದೆ. ಯುದ್ಧ ಕೊನೆಗೊಳಿಸುವಂತೆ ಜಾಗತಿಕ ಸಮುದಾಯ ಒತ್ತಡ ಹೇರುತ್ತಿದೆ. ಈ ಹಿನ್ನೆಲೆಯಲ್ಲಿ ಶಾಂತಿ ಮಾತುಕಗೆಗಳು ನಡೆಯುತ್ತಿವೆ.

Source : Prajavani

1 hour ago

Home Flash News