Select Location
All Locations
State
Region
City / District
ಒಂದೇ ತಿಂಗಳಲ್ಲಿ 215ರಿಂದ 20ಕ್ಕಿಳಿದ ಮಮತಾ ಸಂಖ್ಯಾಬಲ: ದೀದಿಗೆ ಬಿಕ್ಕಟ್ಟು

ಒಂದೇ ತಿಂಗಳಲ್ಲಿ 215ರಿಂದ 20ಕ್ಕಿಳಿದ ಮಮತಾ ಸಂಖ್ಯಾಬಲ: ದೀದಿಗೆ ಬಿಕ್ಕಟ್ಟು

ಕೋಲ್ಕತ್ತ: ಹೋರಾಟ ರಾಜಕೀಯದ ಮೂಲಕ ಪಶ್ಚಿಮ ಬಂಗಾಳದ ರಾಜಕೀಯದ ನಾಡಿಮಿಡಿತವಾಗಿದ್ದ ಮಾಜಿ ಮುಖ್ಯಮಂತ್ರಿ, ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರಿಗೆ ಚುನಾವಣಾ ಫಲಿತಾಂಶ ಹೊರಬಿದ್ದಿರುವ ಬೆನ್ನಲ್ಲೇ ಭಾರಿ ಆಘಾತ ಎದುರಾಗಿದೆ. ನಿಖರವಾಗಿ ಒಂದು ತಿಂಗಳ ಹಿಂದೆ ಮಮತಾ ಬ್ಯಾನರ್ಜಿ, ತೃಣಮೂಲ ಕಾಂಗ್ರೆಸ್‌ನ ಪ್ರಶ್ನಾತೀತ ನಾಯಕಿಯಾಗಿದ್ದರು. ಆದರೆ ಬಿಜೆಪಿ ವಿರುದ್ಧ ಎದುರಾದ ಸೋಲು ಇಡೀ ರಾಜಕೀಯ ಚಿತ್ರಣವನ್ನೇ ಬದಲಾಯಿಸಿತು. ಭವಾನಿಪುರದಲ್ಲಿ ಪಶ್ಚಿಮ ಬಂಗಾಳದ ಈಗಿನ ಮುಖ್ಯಮಂತ್ರಿ ಸುವೇಂದು ಅಧಿಕಾರಿ ವಿರುದ್ಧದ ಸೋಲು ವೈಯಕ್ತಿಕವಾಗಿ ಹಿನ್ನಡೆಗೆ ಕಾರಣವಾಯಿತು. ಅಲ್ಲದೆ ವಿಧಾನಸಭೆಯಲ್ಲಿ ಟಿಎಂಸಿಯ ಸಂಖ್ಯಾಬಲ 80ಕ್ಕೆ ಇಳಿಯಿತು. ಇದರಿಂದಾಗಿ ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳಬೇಕಾಯಿತು. 2021ರ ವಿಧಾನಸಭೆ ಚುನಾವಣೆಯಲ್ಲಿ ಟಿಎಂಸಿ 215 ಸ್ಥಾನಗಳನ್ನು ಗೆದ್ದಿತ್ತು ಎಂಬುದು ಗಮನಾರ್ಹ.

Source : Prajavani

1 hour ago

Home Flash News