Select Location
All Locations
State
Region
City / District
ಬಿಗ್‌ಬಾಸ್ ಸೀಸನ್ 13 ಶೀಘ್ರದಲ್ಲೇ ಆರಂಭ

ಬಿಗ್‌ಬಾಸ್ ಸೀಸನ್ 13 ಶೀಘ್ರದಲ್ಲೇ ಆರಂಭ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಕನ್ನಡದ ದೊಡ್ಡ ರಿಯಾಲಿಟಿ ಶೋ ಬಿಗ್‌ಬಾಸ್ ಸೀಸನ್ 13 ಈ ಬಾರಿ ಬಹುಬೇಗನೆ ಆರಂಭವಾಗಲಿದೆ ಎಂದು ವಾಹಿನಿ ಪ್ರೊಮೊ ಹಂಚಿಕೊಂಡಿದೆ. ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಂಡಿರುವ ವಾಹಿನಿಯು, ‘ವಿಶೇಷದ ಜೊತೆ ಈ ವರ್ಷ ಬಹುಬೇಗ ಕನ್ನಡಿಗರ ಹಬ್ಬ ಆರಂಭವಾಗುತ್ತಿದೆ‘ ಎಂದು ಬರೆದುಕೊಂಡಿದೆ. ಕನ್ನಡ ಬಿಗ್‌ಬಾಸ್ ಸೀಸನ್ 1 ರಿಂದ 12 ರವರೆಗೆ ಕಿಚ್ಚ ಸುದೀಪ್ ಕಿಚ್ಚನ ಸಾರಥ್ಯದಲ್ಲಿ ನಡೆದಿದೆ. ಆದರೆ ಈ ಬಾರಿ ಯಾರು ನಿರೂಪಕರು, ಯಾವಾಗ ಆರಂಭ, ಯಾರು ಸ್ಪರ್ಧಿಗಳು, ಯಾವ ಥೀಮ್‌ನಡಿಯಲ್ಲಿ ಬಿಗ್‌ಬಾಸ್ 13 ಆರಂಭವಾಗುತ್ತಿದೆ ಎಂಬ ಮಾಹಿತಿ ಹಂಚಿಕೊಂಡಿಲ್ಲ. 

ಆದರೂ ಈ ಪ್ರೊಮೊ ಪ್ರೇಕ್ಷಕರನ್ನು ಸೆಳೆದಿದೆ. ಬಿಗ್‌ಬಾಸ್‌ನ 12ನೇ ಆವೃತ್ತಿಯು ಸೆ. 28ರಿಂದ ಆರಂಭವಾಗಿತ್ತು. ಸ್ಪರ್ಧಿಗಳಾಗಿ ಕಾಕ್ರೋಚ್‌ ಸುಧಿ, ನಟಿ ಕಾವ್ಯ ಶೈವ, ಡಾಗ್‌ ಸತೀಶ್‌, ಗಿಲ್ಲಿ ನಟ, ಜಾನ್ವಿ, ಧನುಷ್‌ ಗೌಡ, ಚಂದ್ರಪ್ರಭ, ಮಂಜು ಭಾಷಿಣಿ, ರಾಶಿಕಾ ಶೆಟ್ಟಿ, ಅಭಿಷೇಕ್, ಮಲ್ಲಮ್ಮ, ಅಶ್ವಿನಿ ಎಸ್.ಎನ್, ಧ್ರುವಂತ್, ರಕ್ಷಿತಾ ಶೆಟ್ಟಿ, ಕರಿಬಸಪ್ಪ, ಅಶ್ವಿನಿ, ಸ್ಪಂದನಾ ಹಾಗೂ ವೈಲ್ಡ್ ಕಾರ್ಡ್‌ನಲ್ಲಿ ರಿಷಾ ಗೌಡ, ಸೂರಜ್ ಸಿಂಗ್ ಮತ್ತು ಮ್ಯೂಟಂಟ್ ರಘು ಆಗಮಿಸಿದ್ದರು. 'ಬಿಗ್‌ಬಾಸ್ ಸೀಸನ್ 12' ಗ್ರ್ಯಾಂಡ್ ಫಿನಾಲೆ ಜನವರಿ 18 ರಂದು ನಡೆಯಿತು. ಗಿಲ್ಲಿ ಅವರು ಈ ಆವೃತ್ತಿಯ ವಿಜೇತರಾಗಿ ಹೊರಹೊಮ್ಮಿದ್ದರು. ರಕ್ಷಿತಾ ಶೆಟ್ಟಿ ಅವರು ರನ್ನರ್ ಅಪ್ ಆಗಿ ಆಯ್ಕೆಯಾಗಿದ್ದರು.

Source : Prajavani

1 hour ago

Home Flash News