Select Location
All Locations
State
Region
City / District
Big Update: ಇದೇ ಜೂನ್‌ 15 ರಿಂದ 128 ದಿನದವರೆಗೆ ರೈಲುಗಳ ಓಡಾಟದಲ್ಲಿ ಭಾರೀ ಬದಲಾವಣೆ, ಪ್ರಮುಖ ಟ್ರೈನ್‌ಗಳೇ 2 ತಾಸು ತಡ!

Big Update: ಇದೇ ಜೂನ್‌ 15 ರಿಂದ 128 ದಿನದವರೆಗೆ ರೈಲುಗಳ ಓಡಾಟದಲ್ಲಿ ಭಾರೀ ಬದಲಾವಣೆ, ಪ್ರಮುಖ ಟ್ರೈನ್‌ಗಳೇ 2 ತಾಸು ತಡ!

ಬೆಂಗಳೂರಿನಿಂದ ಕರಾವಳಿ, ಮುರುಡೇಶ್ವರ, ಗೋವಾ (Goa) ಕಡೆಗೆ ರೈಲಿನಲ್ಲಿ ಪ್ರಯಾಣ ಬೆಳೆಸುವ ಪ್ಲಾನ್ ಮಾಡಿದ್ದೀರಾ? ಹಾಗಾದರೆ ಸ್ವಲ್ಪ ನಿಲ್ಲಿ! ನೀವು ಪ್ರತಿದಿನ ಓಡಾಡುವ ರೈಲುಗಳ ಸಮಯ (Railway Timing) ಈಗ ಬದಲಾಗಿದೆ. ಹಳೆ ಟೈಮ್‌ಟೇಬಲ್ ನೋಡಿ ರೈಲ್ವೆ ನಿಲ್ದಾಣಕ್ಕೆ ಹೋದರೆ, ನಿಮ್ಮ ರೈಲು ಮಿಸ್ ಆಗೋದು ಅಥವಾ ಗಂಟೆಗಟ್ಟಲೇ ನೀವು ಕಾಯ್ಕೊಂಡಿರೋದು ಗ್ಯಾರಂಟಿ!

ಹೌದು, ಮುಂಗಾರು ಮಳೆಯ ಅಬ್ಬರ ಶುರುವಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ನೈರುತ್ಯ ರೈಲ್ವೆ (SWR) ಕೊಂಕಣ ಮಾರ್ಗದಲ್ಲಿ ಸಂಚರಿಸುವ ರೈಲುಗಳ ವೇಳಾಪಟ್ಟಿಯಲ್ಲಿ ಭಾರೀ ಬದಲಾವಣೆ ಮಾಡಿದೆ. ಮಳೆಗಾಲದಲ್ಲಿ ರೈಲುಗಳು ನಿಧಾನಗತಿಯಲ್ಲಿ ಚಲಿಸಬೇಕಾದ ಅನಿವಾರ್ಯತೆ ಇರುವುದರಿಂದ ಈ ಹೊಸ 'ಮುಂಗಾರು ವೇಳಾಪಟ್ಟಿ'ಯನ್ನು (Monsoon Time Table) ಜಾರಿಗೆ ತರಲಾಗಿದೆ.

ರೈಲ್ವೆ ಇಲಾಖೆಯ ಪ್ರಕಟಣೆಯ ಪ್ರಕಾರ, ಜೂನ್ 15, 2026 ರಿಂದ ಅಕ್ಟೋಬರ್ 20, 2026 ರವರೆಗೆ ಈ ಹೊಸ ಮುಂಗಾರು ವೇಳಾಪಟ್ಟಿ ಚಾಲ್ತಿಯಲ್ಲಿರಲಿದೆ. ಜೂನ್ 15ರಂದು ಮತ್ತು ಆ ನಂತರ ಹೊರಡುವ ರೈಲುಗಳಿಗೆ ಈ ಹೊಸ ಸಮಯ ಅನ್ವಯವಾಗಲಿದೆ. ರೈಲು ಸಂಖ್ಯೆ 16595/16596: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (KSR) ಬೆಂಗಳೂರು - ಕಾರವಾರ - KSR ಬೆಂಗಳೂರು ಪ್ರತಿದಿನದ ಎಕ್ಸ್‌ಪ್ರೆಸ್ (ಪಂಚಗಂಗಾ ಎಕ್ಸ್‌ಪ್ರೆಸ್). ರೈಲು ಸಂಖ್ಯೆ 16585/16586: ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ (SMVT) ಬೆಂಗಳೂರು - ಮುರುಡೇಶ್ವರ - SMVT ಬೆಂಗಳೂರು ಪ್ರತಿದಿನದ ಎಕ್ಸ್‌ಪ್ರೆಸ್. ರೈಲು ಸಂಖ್ಯೆ 16515/16516: ಯಶವಂತಪುರ - ಕಾರವಾರ - ಯಶವಂತಪುರ ವಾರಕ್ಕೆ ಮೂರು ದಿನದ ಎಕ್ಸ್‌ಪ್ರೆಸ್. ರೈಲು ಸಂಖ್ಯೆ 12741/12742: ವಾಸ್ಕೋ ಡಾ ಗಾಮ - ಪಾಟ್ನಾ - ವಾಸ್ಕೋ ಡಾ ಗಾಮ ಸಾಪ್ತಾಹಿಕ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್. ರೈಲು ಸಂಖ್ಯೆ 11097/11098: ಪುಣೆ - ಎರ್ನಾಕುಲಂ - ಪುಣೆ ಸಾಪ್ತಾಹಿಕ ಎಕ್ಸ್‌ಪ್ರೆಸ್.

Source : News18 Kannada

1 hour ago

Home Flash News