Select Location
All Locations
State
Region
City / District
ಹಲಗೂರು | ಕಾಯಂ ವೈದ್ಯರ ಕೊರತೆ; ಚಿಕಿತ್ಸೆಗೆ ರೋಗಿಗಳ ಪರದಾಟ

ಹಲಗೂರು | ಕಾಯಂ ವೈದ್ಯರ ಕೊರತೆ; ಚಿಕಿತ್ಸೆಗೆ ರೋಗಿಗಳ ಪರದಾಟ

ಹಲಗೂರು: ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಾಯಂ ವೈದ್ಯರ ಸೇವೆ ಲಭ್ಯವಿಲ್ಲದ ಪರಿಣಾಮ ರೋಗಿಗಳು ಸಕಾಲದಲ್ಲಿ ಚಿಕಿತ್ಸೆ ಸಿಗದೆ ಪರದಾಡುವಂತಾಗಿದೆ. ಮಳವಳ್ಳಿ ತಾಲ್ಲೂಕಿನ ಅತಿ ದೊಡ್ಡ ಹೋಬಳಿ ಕೇಂದ್ರವಾಗಿರುವ ಹಲಗೂರು ದಾಖಲೆಗಳಲ್ಲಿ ಗ್ರಾಮವಾಗಿದ್ದರೂ, ಜನಸಂಖ್ಯೆ ಏರಿಕೆಯಿಂದಾಗಿ ಪಟ್ಟಣದ ರೂಪ ಪಡೆದಿದೆ. ಗ್ರಾಮೀಣ ಪ್ರದೇಶದ ಜನಸಾಮಾನ್ಯರು, ಬಡವರು, ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ನೂರಾರು ಕೂಲಿ ಕಾರ್ಮಿಕರು ಸರ್ಕಾರಿ ಆಸ್ಪತ್ರೆಯನ್ನೇ ಚಿಕಿತ್ಸೆಗೆ ಅವಲಂಬಿಸಿದ್ದಾರೆ. ಹಲಗೂರು ಪ್ರಾಥಮಿಕ ಆರೋಗ್ಯ ಕೇಂದ್ರ ಸುಸಜ್ಜಿತ ಕಟ್ಟಡ ಹೊಂದಿದ್ದರೂ ಈ ಹಿಂದೆ ವೈದ್ಯರಾಗಿ ಸೇವೆ ಸಲ್ಲಿಸಿತ್ತಿದ್ದ ಡಾ.ಸೌಮ್ಯಶ್ರೀ ಉನ್ನತ ಶಿಕ್ಷಣಕ್ಕಾಗಿ ತೆರಳಿದ್ದರಿಂದಾಗಿ ಇಲ್ಲಿನ ವೈದ್ಯರ ಸ್ಥಾನ ಹಲವು ದಿನಗಳಿಂದ ಖಾಲಿ ಉಳಿದಿದೆ. ವೈದ್ಯರು ಇಲ್ಲದ ಪರಿಣಾಮ ರೋಗಿಗಳು ಮಳವಳ್ಳಿ ಸೇರಿದಂತೆ ಸುತ್ತಮುತ್ತಲಿನ ಆಸ್ಪತ್ರೆಗಳಿಗೆ ತೆರಳಬೇಕಾದ ಸಂಕಷ್ಟ ಎದುರಾಗಿದೆ. ಹುಸ್ಕೂರು, ದಳವಾಯಿ ಕೋಡಿಹಳ್ಳಿ ಕೇಂದ್ರಗಳ ವೈದ್ಯರು ಹಲಗೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಭಾರ ಸೇವೆ ಮೇಲೆ ಹಂಚಿಕೆ ಅಧಾರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರೂ, ದಳವಾಯಿ ಕೋಡಿಹಳ್ಳಿ ಮತ್ತು ಹುಸ್ಕೂರು ಕೇಂದ್ರಗಳಲ್ಲಿ ರೋಗಿಗಳು ಸಮಸ್ಯೆ ಬಗೆಹರಿಸಲು ಹೆಚ್ಚುವರಿ ವೈದ್ಯರ ಅಗತ್ಯತೆ ಎದುರಾಗಿದೆ.

Source : Prajavani

1 hour ago

Home Flash News