Thalaivar 173: ಹಲವು ಗೊಂದಲದ ನಡುವೆ ಕೊನೆಗೂ ರಜಿನಿ– ಕಮಲ್ ಚಿತ್ರಕ್ಕೆ ಡೈರೆಕ್ಟರ್ ಫಿಕ್ಸ್
ಚೆನ್ನೈ: ಸೂಪರ್ ಸ್ಟಾರ್ ರಜಿನಿಕಾಂತ್ - ಕಮಲ್ ಹಾಸನ್ (Kamal Haasan) ಅವರ ʼತಲೈವರ್ 173ʼ (Thalaivar 173) ಅನೌನ್ಸ್ ಆದ ದಿನದಿಂದ ಸಾಕಷ್ಟು ಗೊಂದಲದಿಂದಲೇ ಸುದ್ದಿಯಾಗುತ್ತಿದೆ. ಮುಖ್ಯವಾಗಿ ನಿರ್ದೇಶಕರ ವಿಚಾರವಾಗಿ ಈ ಗೊಂದಲ ಮುಂದುವರೆದಿದೆ. ಕಮಲ್ ಹಾಸನ್ ನಿರ್ಮಾಣ ಮಾಡಲಿರುವ ರಜಿನಿಕಾಂತ್ (Rajinikanth ಪ್ರಧಾನ ಭೂಮಿಕೆಯಲ್ಲಿ ನಟಿಸಲಿರುವ ಈ ಚಿತ್ರವನ್ನು ಆರಂಭದಲ್ಲಿ ಹಿರಿಯ ನಿರ್ದೇಶಕ ಸುಂದರ್ ಸಿ (Sundar C) ನಿರ್ದೇಶನ ಮಾಡುವುದು ಅಧಿಕೃತವಾಗಿತ್ತು. ಆದರೆ ಅನೌನ್ಸ್ ಆದ ಒಂದೇ ದಿನದಲ್ಲಿ ಸುಂದರ್ ಅವರು ಪ್ರಾಜೆಕ್ಟ್‌ನಿಂದ ಹೊರ ನಡೆದರು. ಆ ಬಳಿಕ ಚಿತ್ರವನ್ನು ʼಡಾನ್ʼ ಖ್ಯಾತಿಯ ಸಿಬಿ ಚಕ್ರವರ್ತಿ (Cibi Chakravarthy) ನಿರ್ದೇಶನ ಮಾಡುತ್ತಾರೆ ಎನ್ನಲಾಗಿತ್ತು. ಆದರೆ ಆ ವಿಚಾರದಲ್ಲೂ ಹೌದೋ ಅಲ್ವೋ ಎನ್ನುವ ಗೊಂದಲ ಸೃಷ್ಟಿಯಾಗಿತ್ತು.
ಇದೀಗ ʼತಲೈವರ್ 173ʼ ಚಿತ್ರದ ನಿರ್ದೇಶನದ ವಿಚಾರದಲ್ಲಿ ಮತ್ತೊಂದು ಸುದ್ದಿ ಹರಿಡಿದೆ. ಕಾಲಿವುಡ್‌ನಲ್ಲಿ ʼಡ್ರ್ಯಾಗನ್ʼ ಮತ್ತು ʼಓ ಮೈ ಕಡವುಲೆʼ ನಂತಹ ಹಿಟ್ ಸಿನಿಮಾಗಳನ್ನು ನೀಡಿರುವ ಅಶ್ವಥ್ ಮಾರಿಮುತ್ತು (Ashwath Marimuthu) ರಜಿನಿ – ಕಮಲ್ ಅವರ ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆ ಎನ್ನುವ ಸುದ್ದಿ ಕಾಲಿವುಡ್ ವಲಯದಲ್ಲಿ ಹರಿದಾಡಿದೆ. ಈ ವಿಚಾರವನ್ನು ಅಶ್ವಥ್ ಮಾರಿಮುತ್ತು ಅವರ ಹುಟ್ಟುಹಬ್ಬದಂದೇ ಕಮಲ್ ಹಾಸನ್ ನಿರ್ಮಾಣದ ಸಂಸ್ಥೆ ಅಧಿಕೃತವಾಗಿ ಹೇಳಿದೆ.