Select Location
All Locations
State
Region
City / District
KH Muniyappa: 'ನೀವು ಸೀನಿಯರ್, ಸ್ವಲ್ಪ ಅನುಸರಿಸಿಕೊಂಡು ಹೋಗಿ!' ಮುನಿಯಪ್ಪಗೆ ರಾಹುಲ್ ಗಾಂಧಿ ಬುದ್ಧಿಮಾತು

KH Muniyappa: 'ನೀವು ಸೀನಿಯರ್, ಸ್ವಲ್ಪ ಅನುಸರಿಸಿಕೊಂಡು ಹೋಗಿ!' ಮುನಿಯಪ್ಪಗೆ ರಾಹುಲ್ ಗಾಂಧಿ ಬುದ್ಧಿಮಾತು

ಬೆಂಗಳೂರು: ಡಿಕೆ ಶಿವಕುಮಾರ್ ಸಿಎಂ (CM DK Shivakumar) ಆಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಆದರೆ ಸಿಎಂ ಆದ 48 ಗಂಟೆಗಳಲ್ಲೇ ಡಿಕೆಶಿ ಸರ್ಕಾರಕ್ಕೆ ಶಾಕ್ ಎದುರಾಗಿದೆ. ಹಿರಿಯ ಶಾಸಕ ರಾಮಲಿಂಗಾರೆಡ್ಡಿ (Ramalinga Reddy) ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದರ ಬೆನ್ನಲ್ಲೇ ಸಚಿವ ಕೆಹೆಚ್ ಮುನಿಯಪ್ಪ (KH Muniyappa) ಕೂಡ ಅಸಮಾಧಾನ ಹೊರಹಾಕಿದ್ದರು. ಹಳೆ ಖಾತೆ ಕೊಟ್ಟಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದ ಮುನಿಯಪ್ಪ, ಬೇರೊಂದು ಖಾತೆಗೆ ಬೇಡಿಕೆ ಇಟ್ಟಿದ್ದರು. ಇದೀಗ ಮುನಿಯಪ್ಪಗೆ ರಾಹುಲ್ ಗಾಂಧಿ (Rahul Gandhi) ಬುದ್ಧಿಮಾತು ಹೇಳಿದ್ದಾರಂತೆ.

ಕೆಎಚ್ ಮುನಿಯಪ್ಪ ಸಿದ್ದರಾಮಯ್ಯ ಸರ್ಕಾರದಲ್ಲಿ ಆಹಾರ ಸಚಿವರಾಗಿದ್ದರು. ಇದೀಗ ಡಿಕೆಶಿ ಸರ್ಕಾರದಲ್ಲೂ ಅವರಿಗೆ ಅದೇ ಖಾತೆ ನೀಡಲಾಗಿದೆ. ಮುನಿಯಪ್ಪ ಅವರು ಸಮಾಜ ಕಲ್ಯಾಣ ಇಲಾಖೆ ಖಾತೆಗೆ ಬೇಡಿಕೆ ಇಟ್ಟಿದ್ದರು. ಆದ್ರೆ ಹೈಕಮಾಂಡ್ ಅವರಿಗೆ ಆಹಾರ & ನಾಗರಿಕ ಸರಬರಾಜು ಇಲಾಖೆ ನೀಡಿದೆ. ಇದ್ರಿಂದ ಬೇಸರಗೊಂಡ ಮುನಿಯಪ್ಪ, ನಾನು ಕೇಳಿದ ಖಾತೆ ಕೊಡದೆ ಹಳೇ ಖಾತೆಯನ್ನೇ ಕೊಟ್ಟಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

ತಮಗೆ ಕೊಟ್ಟಿರುವ ಖಾತೆಯನ್ನ ಬದಲಿಸುವಂತೆ ಸಚಿವ ಕೆ. ಹೆಚ್ ಮುನಿಯಪ್ಪ​​ ಅವರು ಹೈಕಮಾಂಡ್​​ ನಾಯಕರಿಗೆ ಒತ್ತಾಯಿಸಿದ್ದು, ನನ್ನ ಖಾತೆ ಬದಲಾವಣೆ ಮಾಡುವವರೆಗೂ ನಾನು ಅಧಿಕಾರವಹಿಸಿಕೊಳ್ಳಲ್ಲ ಎಂದು ಪಟ್ಟು ಹಿಡಿದಿದ್ದಾರೆ.

Source : News18 Kannada

1 hour ago

Home Flash News