Select Location
All Locations
State
Region
City / District
ಇದಕ್ಕಿಂತ ಫುಲ್ ಸಿನಿಮಾನೇ ಹಾಕಿ: ಅರ್ಜುನ್ ಸರ್ಜಾ ಚಿತ್ರದ ಟ್ವಿಸ್ಟ್‌ಗಳು ಇನ್‌ಸ್ಟಾದಲ್ಲಿ ವೈರಲ್, ಫ್ಯಾನ್ಸ್ ಆಕ್ರೋಶ

ಇದಕ್ಕಿಂತ ಫುಲ್ ಸಿನಿಮಾನೇ ಹಾಕಿ: ಅರ್ಜುನ್ ಸರ್ಜಾ ಚಿತ್ರದ ಟ್ವಿಸ್ಟ್‌ಗಳು ಇನ್‌ಸ್ಟಾದಲ್ಲಿ ವೈರಲ್, ಫ್ಯಾನ್ಸ್ ಆಕ್ರೋಶ

ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ ನಟನೆಯ ತಮಿಳು ಸಿನಿಮಾ 'ಬ್ಲಾಸ್ಟ್' ಭರ್ಜರಿ ಯಶಸ್ಸು ಗಳಿಸುತ್ತಿದೆ. ಆದರೆ, ಚಿತ್ರದ ಪ್ರಮುಖ ಟ್ವಿಸ್ಟ್‌ಗಳು ಮತ್ತು ದೃಶ್ಯಗಳನ್ನು ಥಿಯೇಟರ್‌ನಿಂದಲೇ ರೆಕಾರ್ಡ್ ಮಾಡಿ ಇನ್‌ಸ್ಟಾಗ್ರಾಮ್‌ನಲ್ಲಿ ಹರಿಬಿಡಲಾಗುತ್ತಿದ್ದು, ಇದು ವಿವಾದಕ್ಕೆ ಕಾರಣವಾಗಿದೆ. ಕೆಲವು ಸಿನಿಮಾಗಳು ಹಾಗೇನೇ, ರಿಲೀಸ್‌ಗೂ ಮುನ್ನ ಯಾವುದೇ ಸದ್ದು ಮಾಡಲ್ಲ, ದೊಡ್ಡ ನಿರೀಕ್ಷೆಗಳೂ ಇರಲ್ಲ. ಆದರೆ ಥಿಯೇಟರ್‌ನಲ್ಲಿ ಅಬ್ಬರಿಸಿ ದೊಡ್ಡ ಹಿಟ್ ಆಗುತ್ತವೆ. ಇತ್ತೀಚೆಗೆ ತಮಿಳು ಚಿತ್ರರಂಗದಲ್ಲಿ ಈ ಟ್ರೆಂಡ್ ಹೆಚ್ಚಾಗಿದೆ. ಈ ಸಾಲಿಗೆ ಹೊಸ ಸೇರ್ಪಡೆ 'ಬ್ಲಾಸ್ಟ್' ಎಂಬ ತಮಿಳು ಸಿನಿಮಾ. ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ ನಾಯಕರಾಗಿರುವ ಈ ಚಿತ್ರಕ್ಕೆ ಪ್ರೇಕ್ಷಕರಿಂದ ಅದ್ಭುತ ರೆಸ್ಪಾನ್ಸ್ ಸಿಗುತ್ತಿದೆ. ಬಾಕ್ಸ್ ಆಫೀಸ್‌ನಲ್ಲೂ 'ಬ್ಲಾಸ್ಟ್' ಧೂಳೆಬ್ಬಿಸುತ್ತಿದೆ. ಸಿನಿಮಾ ಥಿಯೇಟರ್‌ಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿರುವಾಗಲೇ, ಚಿತ್ರದ ಪ್ರಮುಖ ಟ್ವಿಸ್ಟ್‌ಗಳು ಸೇರಿದಂತೆ ಹಲವು ದೃಶ್ಯಗಳು ಈಗ ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆಗಿವೆ. ಅರ್ಜುನ್ ಸರ್ಜಾ ಅವರ ಇಂಟ್ರೊಡಕ್ಷನ್ ಸೀನ್, ಫ್ಯಾಮಿಲಿ ಫೈಟ್ಸ್ ಹೀಗೆ ಎಲ್ಲವೂ ರೀಲ್ಸ್ ರೂಪದಲ್ಲಿ ಹರಿದಾಡುತ್ತಿವೆ. ಅಚ್ಚರಿ ಎಂದರೆ, ಈ ವಿಡಿಯೋಗಳಿಗೆ ಮಿಲಿಯನ್‌ಗಟ್ಟಲೆ ವೀವ್ಸ್ ಬಂದಿದೆ.

Source : Asianet News

1 hour ago

Home Flash News