Select Location
All Locations
State
Region
City / District
Actress Ramya: ರಾಜ್ಯ ರಾಜಕೀಯಕ್ಕೆ ರಮ್ಯಾ ಎಂಟ್ರಿ? ಡಿಕೆಶಿ ಸಿಎಂ ಆಗ್ತಿದ್ದಂತೆ ಶುರುವಾಗುತ್ತಾ ಪದ್ಮಾವತಿ ಪಾಲಿಟಿಕ್ಸ್?

Actress Ramya: ರಾಜ್ಯ ರಾಜಕೀಯಕ್ಕೆ ರಮ್ಯಾ ಎಂಟ್ರಿ? ಡಿಕೆಶಿ ಸಿಎಂ ಆಗ್ತಿದ್ದಂತೆ ಶುರುವಾಗುತ್ತಾ ಪದ್ಮಾವತಿ ಪಾಲಿಟಿಕ್ಸ್?

ಬೆಂಗಳೂರು (ಜೂ.03): ಲೋಕಭವನದ ಗಾಜಿನ ಮನೆಯಲ್ಲಿ ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ (DK Shivakumar) ಪ್ರಮಾಣವಚನ ಸ್ವೀಕರಿಸಿದ್ದಾರೆ.​ ಡಿಕೆಶಿ ಪದಗ್ರಹಣ ಕಾರ್ಯಕ್ರಮಕ್ಕೆ ಅನೇಕರ ಗಣ್ಯರು ಆಗಮಿಸಿದ್ರು. ಡಿಕೆ ಶಿವಕುಮಾರ್​ ಕುಟುಂಬಕ್ಕೆ ಆಪ್ತರಾಗಿರುವ ನಟಿ ರಮ್ಯಾ (Actress Ramya) ಕೂಡ ಕಾರ್ಯಕ್ರಮಕ್ಕೆ ಆಗಮಿಸಿ ಡಿಕೆ ಶಿವಕುಮಾರ್ ಅವರಿಗೆ ಶುಭಕೋರಿದ್ದಾರೆ. ಇದೇ ವೇಳೆ ರಾಜ್ಯ ರಾಜಕೀಯಕ್ಕೆ ಎಂಟ್ರಿ ಕೊಡುವ ಬಗ್ಗೆ ನಟಿ ರಮ್ಯಾ ಮಾತಾಡಿದ್ದಾರೆ.

ಸ್ಯಾಂಡಲ್​ವುಡ್ ನಟಿ ಹಾಗೂ ಮಾಜಿ ಸಂಸದೆ ನಟಿ ರಮ್ಯಾ ಅವರು ಡಿಕೆ ಶಿವಕುಮಾರ್ ಕುಟುಂಬಕ್ಕೂ ಆತ್ಮೀಯರಾಗಿದ್ದಾರೆ. ಹೀಗಾಗಿ ನೂತನ ಸಿಎಂ ಪ್ರಮಾಣವಚನ ಕಾರ್ಯಕ್ರಮಕ್ಕೆ ಆಗಮಿಸಿದ ನಟಿ ರಮ್ಯಾ ಅವರು, ಡಿಕೆ ಶಿವಕುಮಾರ್ ಅವರು ಮುಖ್ಯಮಂತ್ರಿ ಆಗ್ತಿರೋದು ಖುಷಿ ತಂದಿದೆ ಎಂದಿದ್ದಾರೆ. 'ಸಿಎಂ ಆಸೆ ಹೇಳಿಕೊಂಡಿದ್ರು ಡಿಕೆಶಿ' ಡಿಕೆ ಶಿವಕುಮಾರ್​ ಅವರು ನಮ್ಮ ಪಕ್ಷಕ್ಕಾಗಿ ಕೆಲಸ ಮಾಡಿದ್ದಾರೆ. ಇದೀಗ ಮುಖ್ಯಮಂತ್ರಿ ಆಗಿರೋದು ಸಂತಸದ ವಿಚಾರ ಎಂದಿದ್ರು. ನಿಮ್ಮ ಬಳಿಯೂ ಡಿಕೆಶಿ ಸಿಎಂ ಆಗ್ಬೇಕು ಅನ್ನೋ ಬಗ್ಗೆ ಹೇಳಿಕೊಂಡಿದ್ರಾ ಎಂಬ ಪ್ರಶ್ನೆಗೆ ಉತ್ತರಿಸಿದ ರಮ್ಯಾ, ಖಂಡಿತಾ ಹಲವು ಬಾರಿ ಹೇಳಿಕೊಂಡಿದ್ದರು ಎಂದಿದ್ದಾರೆ.

Source : News18 Kannada

1 hour ago

Home Flash News