ಅಮೆರಿಕದ ವಿರುದ್ಧ ಜಾಗತಿಕವಾಗಿ ಅಸಮಾಧಾನ ಮೂಡಲು ನೀವೇ ಕಾರಣ: ನೆತನ್ಯಾಹುಗೆ ಟ್ರಂಪ್
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರಿಗೆ ಸೋಮವಾರ ದೂರವಾಣಿ ಕರೆ ಮಾಡಿ ತರಾಟೆ ತೆಗೆದುಕೊಂಡಿದ್ದಾರೆ. ಅಮೆರಿಕದ ವಿರುದ್ಧ ಜಾಗತಿಕ ಮಟ್ಟದಲ್ಲಿ ಅಸಮಾಧಾನ ತೀವ್ರಗೊಳ್ಳಲು ಇಸ್ರೇಲ್ ನಾಯಕರೇ ಕಾರಣ ಎಂದು ಆರೋಪಿಸಿರುವುದಾಗಿ ‘Axios’ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಲೆಬನಾನ್ ವಿರುದ್ಧ ಕೈಗೊಂಡ ಸೇನಾ ಕ್ರಮಗಳ ಕುರಿತು ಅಮೆರಿಕದೊಂದಿಗೆ ರಾಜತಾಂತ್ರಿಕ ಮಾತುಕತೆ ನಡೆಸುವುದನ್ನು ನಿಲ್ಲಿಸುವುದಾಗಿ ಸೋಮವಾರ ಬೆಳಿಗ್ಗೆ ಇಸ್ರೇಲ್ ಬೆದರಿಕೆ ಒಡ್ಡಿತ್ತು. ಇದು, ಟ್ರಂಪ್ ಅಸಮಾಧಾನಕ್ಕೆ ಕಾರಣವಾಗಿದೆ. ನೆತನ್ಯಾಹು ಅವರಿಗೆ ಕರೆ ಮಾಡಿರುವ ಟ್ರಂಪ್, ಇಸ್ರೇಲ್ ಮೇಲೆ ಹಿಜ್ಬೊಲ್ಲಾ ನಡೆಸಿದ ದಾಳಿಯ ವಿರುದ್ಧ ಕೈಗೊಂಡ ಪ್ರತಿಕ್ರಮಗಳ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿರುವುದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಹಿಜ್ಬುಲ್ಲಾ ಸಂಘಟನೆಯನ್ನು ಗುರಿಯಾಗಿಸಿ ಲೆಬನಾನ್ ಮೇಲಿನ ದಾಳಿಯನ್ನು ಇಸ್ರೇಲ್ ತೀವ್ರಗೊಳಿಸಿದೆ. ದಕ್ಷಿಣ ಲೆಬನಾನ್‌ನ ಪಟ್ಟಣಗಳು ಮತ್ತು ಹಳ್ಳಿಗಳ ಮೇಲೆ ಬುಧವಾರ ಮತ್ತು ಗುರುವಾರ ಬಾಂಬ್ ದಾಳಿ ನಡೆದಿತ್ತು. ಗುರುವಾರ ಬೈರೂತ್‌ನ (ಲೆಬನಾನ್ ರಾಜಧಾನಿ) ದಕ್ಷಿಣ ಉಪನಗರದಲ್ಲಿರುವ ವಸತಿ ಕಟ್ಟಡವೊಂದನ್ನು ಗುರಿಯಾಗಿಸಿ ಇಸ್ರೇಲ್ ಕ್ಷಿಪಣಿ ದಾಳಿ ನಡೆದಿತ್ತು.
ತೀವ್ರಗೊಳಿಸಿದ ಇಸ್ರೇಲ್ ಲೆಬನಾನ್‌ನಲ್ಲಿ ಹಿಜ್ಬುಲ್ಲಾ ಗುರಿಯಾಗಿಸಿ ವೈಮಾನಿಕ ದಾಳಿ ತೀವ್ರಗೊಳಿಸಿದ ಇಸ್ರೇಲ್ ಇದನ್ನೂ ಓದಿ:ಇಸ್ರೇಲ್ ದಾಳಿಗೆ ಲೆಬನಾನ್‌ನಲ್ಲಿ ಪ್ರತಿದಿನ ಸರಾಸರಿ 11 ಮಕ್ಕಳು ಸಾವು: ಯುನಿಸೆಫ್ ಇಸ್ರೇಲ್ ದಾಳಿಗೆ ಲೆಬನಾನ್‌ನಲ್ಲಿ ಪ್ರತಿದಿನ ಸರಾಸರಿ 11 ಮಕ್ಕಳು ಸಾವು: ಯುನಿಸೆಫ್ ‘ಲೆಬನಾನ್ ಮೇಲಿನ ಕೃತ್ಯಗಳ ಕಾರಣಕ್ಕಾಗಿ ಇದೀಗ ಎಲ್ಲರೂ ಇಸ್ರೇಲ್ ಅನ್ನು ದ್ವೇಷಿಸುತ್ತಿದ್ದಾರೆ’ ಎಂದು ಟ್ರಂಪ್ ಹೇಳಿರುವುದಾಗಿ ‘Axios’ಗೆ ಮತ್ತೊಂದು ಮೂಲ ತಿಳಿಸಿದೆ. ಆದಾಗ್ಯೂ, ದೂರವಾಣಿ ಕರೆ ವೇಳೆ ಇಸ್ರೇಲ್ ಪ್ರಧಾನಿಯನ್ನು ಟ್ರಂಪ್ ಪೇಚಿಗೆ ಸಿಲುಕಿಸಿದ್ದಾರೆ. ಹೀಗಾಗಿ, ‘ಸರಿ ಸರಿ, ಎಲ್ಲವನ್ನೂ ನೋಡಿಕೊಳ್ಳಿ’ ಎಂದು ನೆತನ್ಯಾಹು ಹೇಳಿದ್ದಾರೆ ಎಂಬುದಾಗಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದಲ್ಲೆದರ ನಂತರವೂ ನೆತನ್ಯಾಹು ಕಚೇರಿ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ, ‘ಇಸ್ರೇಲ್ ನಿಲುವು ಹಾಗೆಯೇ ಇರಲಿದೆ’ ಎಂದು ಪ್ರತಿಪಾದಿಸಲಾಗಿದೆ. ಮಾತುಕತೆ ಬಳಿಕ ಸಾಮಾಜಿಕ ಮಾಧ್ಯಮ ವೇದಿಕೆ ‘ಟ್ರುತ್ ಸೋಶಿಯಲ್’ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಟ್ರಂಪ್, ‘ಬೈರೂತ್‌ನತ್ತ ಯಾವುದೇ ಪ್ರಮುಖ ದಾಳಿ ನಡೆಸದಂತೆ’ ತಿಳಿಸಿದ್ದೇವೆ. ಬಳಿಕ ಇಸ್ರೇಲ್ ಸೇನೆಯನ್ನು ವಾಪಸ್ ಕರೆಸಿಕೊಳ್ಳಲಾಗಿದೆ ಎಂದು ಬರೆದುಕೊಂಡಿದ್ದಾರೆ.